80 ರ ದಶಕದ ಪ್ರೇಮ್ ಕಹಾನಿ ಹಾಗೂ ಸಸ್ಪೆಂಸ್ ಥ್ರಿಲ್ಲಿಂಗ್ ಕಥೆಯ ಆಧಾರಿತವಾದ ಚಲನಚಿತ್ರ ಬೆಲ್ ಬಾಟಮ್ ಆಗಿತ್ತು. ಸಿನೆಮಾ ಬಿಡುಗಡೆ ಆಗಿ ರಾಜ್ಯಾದ್ಯಂತ ಹೌಸೆಫುಲ್ ಪ್ರದರ್ಶನ ಕಂಡಿತ್ತು. ಡಿಟೆಕ್ಟಿವ್ ದಿವಾಕರನ ಪಾತ್ರದಲ್ಲಿ ಮೊದಲನೇ ಬಾರಿಗೆ ರಿಷಬ್ ಶೆಟ್ಟಿ ನಾಯಕ ನಟನಾಗಿ ಮಿಂಚಿದ್ದರು. ರಿಷಬ್ ಶೆಟ್ಟಿ ಈ ಹಿಂದೆ ನಿರ್ದೇಶಕರಾಗಿ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಕಿರಿಕ್ ಪಾರ್ಟಿ, ರಿಕ್ಕಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೂಡು ಅನ್ನೋ ಹಿಟ್ ಚಿತ್ರಗಳು ರಿಷಬ್ ಕನ್ನಡ ಚಿತ್ರರಂಗಕ್ಕೆ ನೀಡಿದ್ದಾರೆ. ರಿಷಬ್ ಕನ್ನಡ ಇಂಡಸ್ಟ್ರಿ ಗೆ ನಟನಾಗಬೇಕೆಂದು ಬಂದಿದ್ದರಂತೆ, ಆದರೆ ಅವರ ಈ ಆಸೆ ಬೆಲ್ ಬಾಟಮ್ ಚಿತ್ರದ ಮೂಲಕ ಈಡೇರಿದೆ. ಈಗ ಅದೇ ಶೀರ್ಷಿಕೆ ಇಟ್ಟುಕೊಂಡು ಬೆಲ್ ಬಾಟಮ್ 2 ಚಿತ್ರ ಮಾಡುವುದರಾಗಿ ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.
ಮತ್ತೊಮ್ಮೆ ಡಿಟೆಕ್ಟಿವ್ ದಿವಾಕರ ತೆರೆ ಮೇಲೆ ಬರಲಿದ್ದಾರೆ
ಹರಿಪ್ರಿಯಾ ಹಾಗೂ ಶೆಟ್ಟಿ ಅವರ ಕೆಮಿಸ್ಟ್ರಿ ಚಿತ್ರದಲ್ಲಿ ಬಹಳ ಸೊಗಸಾಗಿ ಮೂಡಿ ಬಂದಿದೆ. ಸಿನೆಮಾ ಯಶಸ್ಸಿನಿಂದ ಇಡೀ ಚಿತ್ರತಂಡ ಫುಲ್ ಖುಷ್ ಆಗಿದ್ದಾರೆ. ಚಿತ್ರದ ನಿರ್ಮಾಪಕ ಸಂತೋಷ್ ಕುಮಾರ್ ಬೆಲ್ ಬಾಟಮ್ 2 ಮಾಡಲು ಸಿದ್ದರಾಗಿದ್ದಾರೆ, ಅಂತಾ ಬೆಲ್ ಬಾಟಮ್ ಟೀಮ್ ಇಂದ ಸುದ್ದಿ ಬಂದಿದೆ. ಚಿತ್ರ ಹಿಟ್ ಆದ ಕಾರಣದಿಂದ, ಇದರ ಮುಂದಿನ ಭಾಗ ಮಾಡಲು ನಿರ್ಮಾಪಕರು ಆಸಕ್ತಿ ತೋರಿಸಿದ್ದಾರೆ. ಬೆಲ್ ಬಾಟಮ್ 2 ಚಿತ್ರ ಕಥೆ ಕೂಡ ಸಿದ್ದವಾಗಿದೆ. ವಿಬಿನ್ನವಾದ, ಪತ್ತೆದಾರಿಯ ಕಥೆ ಬರೆದಿದ್ದರು ಟಿಕೆ ದಯಾನಂದ್, ಇದನ್ನು ಟೋನಿ ಖ್ಯಾತಿಯ ನಿರ್ದೇಶಕ ಜಯ ತೀರ್ಥ ನಿಗೂಢವಾದ ಸನ್ನಿವೇಶಗಳ ಜೊತೆ ರೆಟ್ರೋ ಮಾದರಿಯಲ್ಲಿ ಪ್ರೇಮದ ಸೊಬಗನ್ನು ತೆರೆ ಮೇಲೆ ಪ್ರದರ್ಶಿಸಿದ್ದರು.
ಬೆಲ್ ಬಾಟಮ್ 2 ಚಿತ್ರಕ್ಕೆ ರಿಷಬ್ ಶೆಟ್ಟಿ ಗ್ರೀನ್ ಸಿಗ್ನಲ್ ನೀಡಿದ್ದಾರೆ
ಟಿಕೆ ದಯಾನಂದ್ ಮತ್ತೊಮ್ಮೆ ಅದೇ ರೀತಿಯಲ್ಲಿ ಕಥೆಯನ್ನು ಪಾರ್ಟ್ 2 ಗಾಗಿ ಬರೆದಿದ್ದಾರಂತೆ, ಸೇಮ್ 1980 ನಡೆದ ಘಟನೆಯನ್ನು ಇಟ್ಟುಕೊಂಡು ಈಗ ಮತ್ತೊಮ್ಮೆ ಡಿಟೆಕ್ಟಿವ್ ದಿವಾಕರನನ್ನು ತೆರೆ ಮೇಲೆ ತರಲಿದ್ದಾರೆ. ಚಿತ್ರದ ಕತೆ ರಿಷಬ್ ಗೆ ಇಷ್ಟವಾಗಿದ್ದು, ಪಾರ್ಟ್ 2 ಅಲ್ಲಿ ನಟಿಸಲು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸಧ್ಯಕ್ಕೆ ರಿಷಬ್ ನಾಥುರಾಮ್ ಹಾಗೂ ಕಥಾ ಸಂಗಮ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ, ಆದ್ದರಿಂದ ಬೆಲ್ ಬಾಟಮ್ 2 ಚಿತ್ರದ ಚಿತ್ರೀಕರಣ ಸ್ವಲ್ಪ ಮುಂದೂಡಬಹುದು. ದಿವಾಕರನ ಪಾತ್ರಕ್ಕಂತೂ ರಿಷಬ್ ಖಾಯಮ್ಮು, ಹಾಗಾದರೆ ಈ ಸಿನೆಮಾದಲ್ಲಿ ಹರಿಪ್ರಿಯಾ ನಟಿಸಲಿದ್ದಾರ? ಚಿತ್ರ ನಿರ್ದೇಶನದ ಜವಾಬ್ದಾರಿ ಯಾರು ವಹಿಸಿಕೊಳ್ಳುತ್ತಾರೆ? ಇಂತಹ ಪ್ರಶ್ನೆಗಳಿಗೆ ಉತ್ತರ ನಮ್ಮಗೆ ಅತಿ ಶೀಘ್ರದಲ್ಲೆ ದೊರೆಯಬೇಕಿದೆ.
ಬೆಲ್ ಬಾಟಮ್ ನಂತರ ರಿಷಬ್ ಅವರ ಮುಂದಿನ ಚಲನಚಿತ್ರ ನಾಥುರಾಮ್
ಇನ್ನು ರಿಷಬ್ ಶೆಟ್ಟಿ ನಮ್ಮ ಜೊತೆ ಸಂದರ್ಶನವೊಂದರಲ್ಲಿ ಬೆಲ್ ಬಾಟಮ್ ಚಿತ್ರದ ಕುರಿತು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ನಾಥುರಾಮ್ ಸಿನೆಮಾಕ್ಕೆ ರಿಷಬ್ ಜೊತೆಯಾಗಿ ಮಗಳು ಜಾನಕಿ ಧಾರಾವಾಹಿಯ ಜಾನಕಿ ಪಾತ್ರ ಮಾಡಿದ ಗಾನವಿ ಬಣ್ಣ ಹಚ್ಚಲಿದ್ದಾರೆ ಅಂತಾ ವರದಿ ಬಂದಿದೆ. ನಾಥುರಾಮ್ ಗೋಡ್ಸೆ ಮಹಾತ್ಮ ಗಾಂಧಿಯನ್ನೂ ಕೊಂದ ವ್ಯಕ್ತಿಯ ಬಿಂಬಾವಾಗಿ ನನ್ನ ಪಾತ್ರ ರೂಪಿಸಲಾಗಿದೆ ಎಂದು ರಿಷಬ್ ಹೇಳಿದ್ದಾರೆ. ನನ್ನ ರೋಲ್ ರಾಜಕೀಯದ ಧ್ವನಿ ಆಗಿ ಮತ್ತು ಜಗತ್ತಿನ ಪರವಾಗಿ ಪ್ರತಿಬಿಂಬಿಸಲಿದೆ. ಕಿಶೋರ್, ಅಚ್ಯುತ್ ಕುಮಾರ್ ಚಿತ್ರದ ಪ್ರಮುಖ ಪಾತ್ರದಾರಿಗಳಾಗಿ ಕಾಣಿಸಿಕೊಳ್ಳಲಿದ್ದಾರೆ, ಅಂತಾ ಡಿಟೆಕ್ಟಿವ್ ದಿವಾಕರ ಹೇಳಿಕೊಂಡಿದ್ದಾರೆ. ಚಿತ್ರದ ನಿರ್ದೇಶಕರೂ ವಿನು ಬಲನಿಯ, ಸಿನೆಮಕ್ಕಾಗಿ ಸಂಭಾಷಣೆ ಬರೆಯುತ್ತಿರುವವರು ಮಾಸ್ತಿ ಮನು.