ಆಹಾ ಬೆಟ್ಟ, ಗುಡ್ಡಗಳ ಮಧ್ಯೆ ಅದೇನೋ ಆಭರಣದಂತೆ ಕಾಣೋ ಒಂದು ನೋಟ. ಆ ನೋಟವನ್ನ ನೋಡಲು ಎರಡು ಕಣ್ಣು ಸಾಲದು. ಮೈ ಜುಮ್ಮೆನಿಸುವ, ಕಣ್ಣು ಮತ್ತು ಮನಸ್ಸನ್ನ ತಂಪು ಮಾಡುವ ಅವಕಾಶ ಎಲ್ಲದರಲ್ಲೂ ಸಿಗುವುದಿಲ್ಲ. ಮೋಡಗಳಿಗೆ ಆಭರಣದಂತೆ ಕಾಣೋ ಆ ಸೊಬಗೇ ಒಂದು ಅದ್ಭುತ. ಆ ಸೊಬಗನ್ನ ನೋಡುತ್ತಿದ್ದರೆ, ನಾನೇಕೆ ಹಾರಾಡುವ ಪಕ್ಷಿಯಾಗಬಾರದು, ಗಿಡ, ಮರದಂತೆ ಯಾಕೆ ಪ್ರಕೃತಿಯಾಗಬಾರದು ಎಂದೆನಿಸುತ್ತದೆ. ಆ ಮನಮೋಹಕ ದೃಶ್ಯವನ್ನ ನೋಡುತ್ತಿದ್ದರೆ, ಒಂದು ಬಾರಿ ಅದರ ಹತ್ತಿರ ಹೋಗಿ ಅದನ್ನ ಸೆರೆಯಾಗಿಸಬೇಕೆನ್ನಿಸುತ್ತೆ. ಯಾಕಂದ್ರೆ ಆ ಸೊಬಗೇ ಒಂದು ರಮಣೀಯ.
ಆ ರೀತಿ ರಮಣೀಯವಾಗಿ ಕಣ್ಣು ಕೋರೈಸುವುದಾದ್ರು ಏನು? ಹೌದು. ಅದೇ ಈ ಸೂರ್ಯೋದಯ ಹಾಗೂ ಸೂರ್ಯಾಸ್ತ. ಸೂರ್ಯೋದಯವಾಗಿರಲಿ, ಅಥವಾ ಸೂರ್ಯಾಸ್ತವಾಗಿರಲಿ ನೋಡೋಕೆ ಅದೇನೋ ಖುಷಿ. ಇವುಗಳನ್ನ ನೋಡಲು ದೇಶ, ವಿದೇಶಗಳಿಂದ ಜನರು ಬರುತ್ತಾರೆ. ನೋಡುಗರನ್ನ ಒಂದೇ ಕ್ಷಣದಲ್ಲಿ ಸೆರೆ ಹಿಡಿಯೋ ತಾಕತ್ ಇದಕ್ಕೆ ಇದೆ. ಪ್ರಕೃತಿ ಅಂದ್ರೇನೆ ಹಾಗೆ ಅನ್ಸುತ್ತೆ ಅಲ್ವಾ? ಕೋಟಿ ಕೊಟ್ಟು ನಾವು ಏನಾದ್ರು ಪಡೀತೀವಿ ಅಂತ ಕೆಲವ್ರು ಹೇಳ್ತಾರೆ. ಆದ್ರೆ ಅಂತ ಕೋಟಿ ಎಷ್ಟೇ ಇದ್ರೂ, ಇಂತ ಮನಮೋಹಕ ದೃಶ್ಯ ನೋಡಲು ಅದರದೇ ಆದ ವಿಶಿಷ್ಟ ಜಾಗಕ್ಕೆ ಹೋಗಬೇಕು. ಆಗ ಮಾತ್ರ ಅದರ ಸೊಬಗು ತಿಳಿಯುತ್ತೆ.
ಸೂರ್ಯಾಸ್ತ ಅಂದರೆ ಏನು?
ಸೂರ್ಯಾಸ್ತ ಎಂದರೆ ಭೂಮಿಯ ಪರಿಭ್ರಮಣದ ಪರಿಣಾಮವಾಗಿ ದಿಗಂತದ ಕೆಳಗೆ ಸೂರ್ಯ ದೈನಂದಿನ ಮರೆಯಾಗುವುದು. ವರ್ಷಕ್ಕೆ ಕೇವಲ ಒಮ್ಮೆ ಉಂಟಾಗುವ ವಸಂತ ಮತ್ತು ಶರತ್ಕಾಲದ ವಿಷುವತ್ಸಂಕ್ರಾಂತಿ ಗಳಂದು ಸೂರ್ಯ ಪಶ್ಚಿಮದಲ್ಲಿ ನಿಖರವಾಗಿ ಭೂಮಧ್ಯೆ ರೇಖೆಯಲ್ಲಿ ಅಸ್ತವಾಗುತ್ತದೆ. ಸೂರ್ಯಾಸ್ತವು ಅನನ್ಯವಾದ ವಾತಾವರಣ ಸ್ಥಿತಿಗಳನ್ನು ಸೃಷ್ಟಿಸುತ್ತದೆ. ಅಂದರೆ, ಆ ಸಮಯದಲ್ಲಿ ಆಕಾಶದ ಸುತ್ತಲೂ ಕಿತ್ತಳೆ ಹಾಗೂ ಕೆಂಪು ಬಣ್ಣಗಳು ಎದ್ದು ತೋರುತ್ತಿರುತ್ತವೆ. ಸೂರ್ಯಾಸ್ತದ ಸಮಯ ವರ್ಷದಾದ್ಯಂತ ಬದಲಾಗುತ್ತದೆ.
ಕರ್ನಾಟಕದ ವಿಭಿನ್ನ ಸೂರ್ಯಾಸ್ತ ಸ್ಥಳಗಳು.
ಆಗುಂಬೆ
ಪಶ್ಚಿಮ ಘಟ್ಟದ ಆಗುಂಬೆಯು ತನ್ನ ಜೈವಿಕ ವೈವಿದ್ಯತೆ ಮತ್ತು ಪ್ರಾಕೃತಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿರುವ ಆಗುಂಬೆಯನ್ನ ನೋಡಲು ಅನೇಕ ಕಡೆಗಳಿಂದ ಜನರು ಸಾಲು, ಸಾಲಾಗಿ ಬರ್ತಾರೆ. ಯಾಕಂದ್ರೆ, ಇಲ್ಲಿನ ಸೂರ್ಯೋದಯ ಹಾಗೂ ಸೂರ್ಯಾಸ್ತ ನೋಡಲು ಬಹಳ ಚೆಂದ. ಈ ಆಗುಂಬೆಯಲ್ಲಿ ಸೂರ್ಯೋದಯಕ್ಕಿಂತ, ಸೂರ್ಯಾಸ್ತಮಾ ಬಹಳಷ್ಟು ಸುಂದರವಿರುತ್ತೆ. ಮರ, ಗಿಡಗಳ ಮಧ್ಯೆ ನಿಂತು ಸೂರ್ಯಾಸ್ತ ನೋಡಲು ಎರಡು ಕಣ್ಣು ಸಾಲದು. ಒಮ್ಮೆ ನೋಡಿದರೆ, ಮತ್ತೊಮ್ಮೆ, ಮಗದೊಮ್ಮೆ ನೋಡಬೇಕು ಎನಿಸುತ್ತದೆ.
ಮಂಗಳೂರು
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಯಾಕಂದ್ರೆ ಸುಂದರ ಸೂರ್ಯಾಸ್ತ, ಬೋಟ್ ಪಯಣ, ಮರಳಿನ ಹಾದಿಯಲ್ಲಿ ಬರಿಗಾಲಿನ ನಡಿಗೆಯನ್ನ ಎಲ್ಲರು ಇಷ್ಟ ಪಡುತ್ತಾರೆ. ಜೊತೆಗೆ ಸಂಜೆ ಆಯ್ತು ಅಂದ್ರೆ ಸಮುದ್ರದ ತೀರದಲ್ಲಿ ನಿಂತು ಸೂರ್ಯಾಸ್ತ ನೋಡೋದೇ ಒಂದು ಸೌಭಾಗ್ಯ. ಮಂಗಳೂರು ಕಡಲ ತೀರ ಆಗಿರೋದ್ರಿಂದ ಸೂರ್ಯಾಸ್ತ ನೋಡಲು ಬಹಳಷ್ಟು ಸೊಗಸಾಗಿರುತ್ತೆ. ನೋಡುಗರಿಗೆ ಸಮುದ್ರವೇ, ಸೂರ್ಯನನ್ನ ನುಂಗಿಕೊಳ್ಳುತ್ತಿದೆ ಎನಿಸುತ್ತದೆ. ಅಷ್ಟು ಮೋಹಕವಾಗಿ ಕಾಣುತ್ತದೆ.
ಮುಳ್ಳಯ್ಯನ ಗಿರಿ
ಆಹಾ ಮುಳ್ಳಯ್ಯನ ಗಿರಿ. ಹೆಸರು ಕೇಳಿದ್ರೆ ಯಾರು ಬೇಕಾದ್ರು ಹೇಳ್ತಾರೆ, ಅದ್ಭುತ ಸ್ಥಳ ಅಂತ. ಹೌದು. ಸುತ್ತಲೂ ಕಾಡು. ಕಾಡಿನ ಮಧ್ಯೆ ಹೊಗೆಯಂತೆ ಬರೋ ಮಂಜು. ಸಣ್ಣಗೆ ಜಿನುಗುವ ಮಳೆ ಹನಿ. ಇವುಗಳ ಮಧ್ಯೆ ಸಂಜೆ ಆದ ಕೂಡಲೇ, ಒಂದು ಮೂಲೆಯಲ್ಲಿ ಬಣ್ಣಗಳ ಚಿತ್ತಾರ ಎದ್ದು ತೋರುತ್ತೆ. ಅದೇ ಈ ಸೂರ್ಯಾಸ್ತ. ಮುಳ್ಳಯ್ಯನ ಗಿರಿಯಂಥ ಕಾಡು, ಮೇಡಿನ ನಡುವೆ ಸೂರ್ಯೋದಯ ಹಾಗೂ ಸೂರ್ಯಾಸ್ತ ನೋಡೋದು ಅಂದ್ರೆ ಮನಸ್ಸಿಗೆ ಅದೇನೋ ಒಂದು ರೀತಿ ಮುದ ನೀಡುವಂತಿರುತ್ತದೆ. ಮುಳ್ಳಯ್ಯನ ಗಿರಿ ಸೂರ್ಯಾಸ್ತ ನೋಡಬೇಕಾ ಹಾಗಾದ್ರೆ, ಚಿಕ್ಕಮಗಳೂರಿಗೆ ಭೇಟಿ ನೀಡಿ.
ಉಡುಪಿ
ಕರ್ನಾಟಕ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾದ ಉಡುಪಿ ಬಲು ಸುಂದರ. ಕೃಷ್ಣನ ದರ್ಶನ ಪಡೆಯಲು ದೇಶ, ವಿದೇಶಗಳಿಂದ ಜನರು ಬರುತ್ತಾರೆ. ಜೊತೆಗೆ ಇಲ್ಲಿಗೆ ಬಂದವರು ಯಾರು ಇಲ್ಲಿನ ಸೂರ್ಯೋದಯ ಹಾಗೂ ಸೂರ್ಯಾಸ್ತ ನೋಡದೆ ಹಾಗೆ ಹೋಗುವುದಿಲ್ಲ. ಯಾಕಂದ್ರೆ ಇಲ್ಲಿ ಸಮುದ್ರದ ಮುಂದೆ ನಿಂತು ಸೂರ್ಯಾಸ್ತ ನೋಡಲು ಬಹಳ ರಮಣೀಯವಾಗಿರುತ್ತದೆ. ಅಲೆಗಳ ಮಧ್ಯೆ ಸೂರ್ಯ ನಮ್ಮಿಂದ ದೂರ ಹೋಗುವುದನ್ನ ನೋಡಲು ಎರಡು ಕಣ್ಣು ಸಾಲದು. ಏನೇ ಹೇಳಿ ಸಮುದ್ರದ ಮುಂದೆ ಸೂರ್ಯಾಸ್ತ ನೋಡಲು ತುಂಬಾ ಚೆನ್ನ.
ಹಂಪಿ
ಹಂಪಿ ಸೊಬಗನ್ನ ಯಾರಿಂದಲೂ ಕೇವಲ ಬಾಯಲ್ಲಿ ಹೇಳಲು ಆಗುವುದಿಲ್ಲ. ಅಲ್ಲಿ ಹೋಗಿ ನೋಡಿದವರಿಗೆ ಮಾತ್ರ ಗೊತ್ತು ಅಲ್ಲಿನ ವೈಶಿಷ್ಟ್ಯ. ದಿನಕ್ಕೆ ಸಾವಿರಾರು ಜನ ಇಲ್ಲಿಗೆ ಬರುತ್ತಾರೆ. ದಿನಪೂರ್ತಿ ಇಲ್ಲಿನ ಅನೇಕ ಸ್ಥಳಗಳನ್ನ ನೋಡಿ, ಸಂಜೆಯಾದ ಕೂಡಲೇ ಹೇಮಕೂಟ ಪರ್ವತದತ್ತ ತೆರಳುತ್ತಾರೆ. ಯಾಕಂದ್ರೆ, ಹೇಮಕೂಟದಲ್ಲಿ ನಿಂತು ಇಡೀ ಹಂಪಿಯ ಸೊಬಗನ್ನ ನೋಡಬಹುದು. ಈ ಪರ್ವತ ಮೇಲೆ ನಿಂತು ಸೂರ್ಯಾಸ್ತ ನೋಡಿದರೆ, ಇಂಥ ಸೌಂದರ್ಯ ಇನ್ನೆಲ್ಲೂ ಇಲ್ಲ ಎನಿಸುತ್ತದೆ. ಇಲ್ಲಿಗೆ ಸೂರ್ಯಾಸ್ತ ನೋಡಲೆಂದು ಬರುವ ಪ್ರೇಕ್ಷಕರಿಗಾಗಿ, ಆಸನಗಳ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾಕಂದ್ರೆ ಕೆಲವರು ಇಂತ ಅದ್ಭುತಗಳನ್ನ ನೋಡಿ, ತಮ್ಮ ನೋವನ್ನ ಮರೆಯುತ್ತಾರೆ. ಜೊತೆಗೆ ಕೆಲವರು, ಛಾಯಾಗ್ರಹಣ ಮಾಡಲೆಂದು ಬಂದಿರುತ್ತಾರೆ. ಹಾಗಾಗಿ ಯಾರಿಗೂ, ತೊಂದರೆಯಬಾಗರದೆಂದು ಕೆಲವು ವ್ಯವಸ್ಥೆಗಳನ್ನ ಮಾಡಲಾಗಿದೆ.
ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ ಅಂದ ಕೂಡಲೇ ಕೆಲವರು ಏನೆಂದುಕೊಳ್ಳುತ್ತಾರೆ ಅಂದ್ರೆ, ಕೇವಲ ಕೆಮ್ಮಣ್ಣಿನ ಗುಂಡಿಗಳಿಂದ ತುಂಬಿರುತ್ತದೆ ಅಂತ ಅನ್ಕೊಂಡಿರ್ತರೆ. ಆದ್ರೆ ಇಲ್ಲಿನ ವಾತಾವರಣವೇ ಬೇರೆ. ಹೌದು. ಬೆಟ್ಟದ ಮೇಲೆ ಸಂಪೂರ್ಣ ಹೂಗಳಿಂದ ಅಲಂಕೃತಗೊಂಡಿರುವ ಈ ಕೆಮ್ಮಣ್ಣುಗುಂಡಿ ನೋಡಲು ಬಹಳ ಅದ್ಭುತವಾಗಿದೆ. ಕೇವಲ ಈ ಬೆಟ್ಟವನ್ನ ಹೂಗಳಿಂದಲೇ ಅಲಂಕಾರ ಮಾಡಿದ್ದಾರೆ. ಜೊತೆಗೆ ಇದು ಒಂದು ಸುಂದರ ಬೆಟ್ಟವಾದ್ದರಿಂದ ಇಲ್ಲಿ ಸೂರ್ಯಾಸ್ತ ಬಲು ಸುಂದರ. ಚಿಕ್ಕಮಗಳೂರಿನ ಬಿಸಿಬಿಸಿ ಕಾಫಿ ಸವಿಯುತ್ತ ಇಲ್ಲಿನ ಸೂರ್ಯಾಸ್ತ ನೋಡೋದೇ ಇಲ್ಲಿನ ವಿಶೇಷ. ಇಲ್ಲಿಗೆ ಬರುವ ಪ್ರತಿಯೊಬ್ಬರೂ ಕಾಫಿಯೊಂದಿಗೆ ಸೂರ್ಯಾಸ್ತ ನೋಡಲು ಹೋಗುತ್ತಾರೆ. ಯಾಕಂದ್ರೆ ಇಲ್ಲಿನ ಕಾಫಿ ರುಚಿಗೂ, ಸೂರ್ಯಸ್ತದ ವೀಕ್ಷಣೆ ನೋಡಲು ಬಹಳ ಚೆಂದ. ಹಾಗಾಗಿ ಇಲ್ಲಿನ ಸೂರ್ಯಾಸ್ತ ನೋಡುವವರು ಕಾಫಿ ಹಿಡಿದುಕೊಂಡೆ ಬೆಟ್ಟದ ಕಡೆ ಹೋಗುತ್ತಾರೆ.
ಜೋಯ್ಡಾ
ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕಾಗಿರುವ ಜೋಯ್ಡಾ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ಆದ್ರೆ ಇಲ್ಲಿನ ಸೌಂದರ್ಯವನ್ನ ಹೇಳಲು, ಪದಗಳಲ್ಲಿ ಸಾಲುವುದಿಲ್ಲ. ಹೌದು. ಸಂಪೂರ್ಣ ದಟ್ಟ ಅರಣ್ಯವಾಗಿರುವ ಈ ಪ್ರದೇಶಕ್ಕೆ ಎಗ್ಗಿಲ್ಲದ ಸೊಬಗಿದೆ. ಸಂಪೂರ್ಣ ಕಾಡು, ಹಾಗೂ ನದಿಗಳಿಂದ ಆವೃತಗೊಂಡಿದೆ. ಇಲ್ಲಿ ಸುತ್ತಮುತ್ತಲ್ಲೂ ನದಿಗಳ ಸಾಲು ಇರೋದ್ರಿಂದ, ಸೂರ್ಯಾಸ್ತದ ಸಮಯದಲ್ಲಿ ಯಾವ ಕಡೆಯಿಂದ ನೋಡಿದರು, ಎಲ್ಲ ನದಿಗಳು ವಿಭಿನ್ನ ಬಣ್ಣಗಲ್ಲಿ ಗೋಚರಿಸುತ್ತವೆ. ಜೊತೆಗೆ ನದಿಗಳ ಮೇಲೆ ಮರಗಳ ನೆರಳು ಹೆಚ್ಚಾಗಿ ಬಿಳೋದ್ರಿಂದ ನದಿಗಳ ಸೊಬಗು ಅತ್ಯದ್ಭುತ. ಇಲ್ಲಿನ ಸೂರ್ಯಾಸ್ತವನ್ನ ನೋಡಿದವರಿಗೆ ಮಾತ್ರ ಗೊತ್ತಿರುತ್ತೆ, ಇದರ ಸೊಬಗು ಎಂಥದ್ದು ಎಂದು.
ಕೊಡಚಾದ್ರಿ
ಕೊಡಚಾದ್ರಿಯ ಸೂರ್ಯಾಸ್ತ ಅಪರೂಪ. ಆದ್ರೂ ಅಪರೂಪಕ್ಕಾಗುವ ಈ ಸೂರ್ಯಾಸ್ತ ಬಹಳ ವಿಶೇಷ. ಶಿಖರದಿಂದ ಸಾಕಷ್ಟು ಸ್ಪಷ್ಟವಾಗಿ ಕಾಣಿಸುವ ಸಮುದ್ರದಲ್ಲಿ, ಚಿನ್ನದ ಬಣ್ಣದ ಸೂರ್ಯನು ಇಲ್ಲಿ ಕಾಣುತ್ತಾನೆ. ಅಪರೂಪಕ್ಕೆ ಇಲ್ಲಿ ಸೂರ್ಯಾಸ್ತ ಆಗುವುದರಿಂದ ಜನರು ಇದನ್ನ ಗಲ್ಲದ ಮೇಲೆ ಕೈ ಇಟ್ಟು ನೋಡುತ್ತಾರೆ. ಇಲ್ಲಿ ಧೂಳಿನ ಅಂಶ ಕಡಿಮೆ ಇರೋದ್ರಿಂದ ಸೂರ್ಯನು ಚಿನ್ನದ ಬುಗುರಿಯಂತೆ, ಚಿನ್ನದ ಬೋಗುಣಿಯಂತೆ, ಗಾಲಿಚಕ್ರದಂತೆ ಕಾಣುತ್ತಾನೆ. ಸಮುದ್ರಗಳ ಅಲೆಯಲ್ಲಿ ಕಾಣೋ ಸೂರ್ಯಸ್ತದಂತೆ, ಇಲ್ಲಿನ ಸೂರ್ಯಾಸ್ತವನ್ನ ನೋಡಬಹುದು. ಇದೆ ಇಲ್ಲಿನ ವಿಶೇಷ ರೀತಿಯ ಸೂರ್ಯಾಸ್ತ.
ಇನ್ನೇಕೆ ತಡ. ನಮ್ಮ ಕರ್ನಾಟಕದಲ್ಲಿ ಇರುವಂತಹ ಸೂರ್ಯಾಸ್ತ ಸ್ಥಳಗಳನ್ನ ನೋಡಲು ಈಗಲೇ ಹೋಗಿ. ಅದ್ಭುತಗಳನ್ನ ನೋಡಲು ಯಾವತ್ತೂ ತಡಮಾಡಬಾರದು.
ಕುಮಾರ ಪರ್ವತ
ದಕ್ಷಿಣ ಕನ್ನಡದ ಸುಳ್ಯದಲ್ಲಿರೋ ಕುಕ್ಕೆ ಸುಬ್ರಮಣ್ಯ ಮತ್ತು ಕೊಡಗಿನ ಸೋಮವಾರಪೇಟೆಗಳ ನಡುವೆ ಹಾಸಿಹೋಗಿರೋ ಬೆಟ್ಟವೇ ಈ ಕುಮಾರ ಪರ್ವತ. ಕರ್ನಾಟಕದಲ್ಲಿರೋ ಕಷ್ಟದ ಟ್ರೆಕಿಂಗ್ ಗಳಲ್ಲಿ ಇದು ಒಂದಾಗಿದೆ. ಜನರು ಈ ಸ್ಥಳವನ್ನ ನೋಡಲು ಮುಗಿಬಿದ್ದು ಹೋಗ್ತಾರೆ. ಯಾಕಾದ್ರೆ ಇದು ಅತಿ ಎತ್ತರದ ಪರ್ವತವಾದ್ದರಿಂದ ಇಲ್ಲಿ ಸೂರ್ಯೋದಯ ಹಾಗೂ ಸೂರ್ಯಾಸ್ತ ಬಲು ಅದ್ಭುತವಾಗಿದೆ. ಹಾಗಾಗಿ ಇಲ್ಲಿಗೆ ಬರುವಂಥ ಪ್ರವಾಸಿಗರು, ತಾವು ನೋಡುವಂತಹ ಸ್ಥಳಗಳೆಲ್ಲಾ ಮುಗಿದಿದ್ದರೂ, ಸಂಜೆ ವರೆಗೂ ಟೆಂಟ್ ಹಾಕಿ ಕಾಡು ನಂತರ ಇಲ್ಲಿನ ಸೂರ್ಯಾಸ್ತ ನೋಡಿಕೊಂಡೆ ಹೋಗುತ್ತಾರೆ. ಸ್ನೇಹತರೆಲ್ಲ ಹೋಗಿ ಎಂಜಾಯ್ ಮಾಡೋಕೆ ಈ ಕುಮಾರ ಪರ್ವತ ಹೇಳಿ ಮಾಡಿಸಿದಂತಿದೆ.
ಮಾಕಲಿ ದುರ್ಗ
ರಾತ್ರಿ ಟ್ರಕ್ಕಿಂಗ್ ಗೆ ಅಂತ ಹೋಗ ಬಯಸುವವರು ಈ ಮಾಕಲಿ ದುರ್ಗವನ್ನ ಆಯ್ಕೆಮಾಡಿಕೊಳ್ಳಬಹುದು. ಯಾಕಂದ್ರೆ ಇದು ರಾತ್ರಿ ಟ್ರಕ್ಕಿಂಗ್ ಗೆ ಬೆಸ್ಟ್ ಆಗಿದೆ. ಇದು ಬೆಂಗಳೂರಿನಿಂದ ಸುಮಾರು ೬೦ ಕಿಮಿ ಹಾಗೂ ದೊಡ್ಡಬಳ್ಳಾಪುರದಿಂದ ೧೦ ಕಿಮಿ ದೂರದಲ್ಲಿದೆ. ಈ ಬೆಟ್ಟದ ಮೇಲೆ ಒಂದು ಕೋಟೆಯಿದೆ. ಆ ಕೋಟೆಯ ಮೇಲೆ ಹತ್ತಿದರೆ, ಅಲ್ಲಿನ ಸಂಪೂರ್ಣ ಸೊಬಗನ್ನ ಕಣ್ತುಂಬಿಕೊಳ್ಳಬಹುದು. ಜೊತೆಗೆ ಕೋಟೆ ಬಹಳ ಎತ್ತರವಾಗಿರುವುದರಿಂದ ಸೂರ್ಯಾಸ್ತ ನಮ್ಮ ಕಣ್ಮುಂದೆಯೇ ಹಾಡು ಹೋದಂತಿರುತ್ತದೆ. ಇದು ಸಹ ಸೂರ್ಯಾಸ್ತ ಸ್ಥಳಕ್ಕೆ ಬಲು ಅದ್ಭುತವಾಗಿದೆ.
ಈ ಪೋಸ್ಟ್ ನಿಮಗೆ ಇಷ್ಟ ವಾದಲ್ಲಿ ಲೈಕ್ ಅಂಡ್ ಫಾಲೋ MetroSaga – Kannada on Facebook