ರೈತರಿಗೆ ಸಹಾಯ ಮಾಡಲು ಉಪ್ಪಿ ಸೂಪರ್ ಐಡಿಯಾ. ಪಕ್ಷದ ಹೊಸ ಪ್ರಣಾಳಿಕೆಯಲ್ಲಿ ಏನು ಹೇಳಿದ್ದಾರೆ ನೋಡಿ.

0
43379
upendra

ಉಪೇಂದ್ರ ಅವರು ತಮ್ಮ ಪಕ್ಷದ ಪ್ರಣಾಳಿಕೆಯ ಎರಡನೇ ಭಾಗವನ್ನು ಹಂಚಿ ಕೊಂಡ್ಡಿದ್ದಾರೆ. ಇದು ಸಂಭಾವ್ಯ ಪಟ್ಟಿ ಆಗಿದ್ದು , ಜನರ ಅನಿಸಿಕೆಗಳ ಮೇಲೆ, ವಿಚಾರಿಸಿ, ಪರಿಶೀಲಿಸಿ, ಉಳಿದ ಭಾಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ. ಈ ಸಂಭಾವ್ಯ ಪ್ರಣಾಳಿಕೆಯ ಅಂಶಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ. ಓದಿ, ನಿಮ್ಮ ಅಭಿಪ್ರಾಯವನ್ನು ತಿಳಿಸಿ.

upendra

 • ಕ್ಷಿಪ್ರ ಗತಿಯಲ್ಲಿ ಪ್ರಗತಿಯನ್ನು ಸಾಧಿಸಲು ಕ್ರಾಂತಿಕಾರಿ ಹೆಜ್ಜೆಗಳೊಂದಿಗೆ ವಿವಿಧ ಗ್ರಾಮೀಣ ಇಲಾಖೆಗಳಿಗೆ ಮೀಸಲು ಪಟ್ಟಿರುವ ಹಣ ಕಾಸನ್ನು ಕ್ರೂಡೀಕರಿಸಿ ಕರ್ನಾಟಕದಾದ್ಯಂತ ಇರುವಂತಹ ಸುಮಾರು 29,736 ಹಳ್ಳಿಗಳಿಗೆ, ಗ್ರಾಮ ಪಂಚಾಯಿತಿಗಳ ಮುಖಾಂತರ ನೇರವಾಗಿ ಹಣ ಕಾಸಿನ ನೆರವನ್ನು ನೀಡಲಾಗುತ್ತಾದೆ.
 • ಕರ್ನಾಟಕದ ಒಟ್ಟು 29,736 ಹಳ್ಳಿಗಳಿಗೆ ವಿವಿಧ ಇಲಾಖೆಗಳಾದ ಗ್ರಾಮೀಣಾಭಿವೃದ್ಧಿ, ವಸತಿ, ಸಮಾಜ ಕಲ್ಯಾಣ, ತೋಟಗಾರಿಕೆ, ಮೀನು ಸಾಕಾಣಿಕೆ, ಪಶು ಸಂಗೋಪನೆ, ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ, ಜಲಸಂಪನ್ಮೂಲ/ ಜಲ ಇಲಾಖೆ, ಸಹಕಾರ ಇಲಾಖೆ ಮತ್ತು ಇತರೆ ಇಲಾಖೆಗಳಲ್ಲಿ ಮೀಸಲಿಡಲಾದ ಗ್ರಾಮೀಣಾಭಿವೃದ್ಧಿಯ ಸುಮಾರು ಅರವತ್ತು ಸಾವಿರ ಕೋಟಿ ರೂಪಾಯಿ ಹಣವನ್ನು ನೇರವಾಗಿ ಗ್ರಾಮ ಪಂಚಾಯತಿ ಇಂದ ವಿವಿಧ ಯೋಜನೆಗಳ ಮೂಲಕ ಗ್ರಾಮಸ್ಥರಿಗೆ ತಲುಪಿಸುವ ವ್ಯವಸ್ಥೆ.
 • ಇದರ ಪ್ರಕಾರ ಸುಮಾರು ಹತ್ತು ಕೋಟಿ ರೂಪಾಯಿ ಗಳನ್ನು ಪ್ರತಿ ಗ್ರಾಮ ಪಂಚಾಯತಿಗಳಿಗೆ ಮೀಸಲಿಡಲಾಗುತ್ತದೆ, ಪ್ರತಿ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಾಲ್ಕರಿಂದ ಐದು ಹಳ್ಳಿಗಳು ವಾರ್ಷಿಕವಾಗಿ ಸುಮಾರು ಎರಡು ಕೋಟಿ ರೂಪಾಯಿಗಳ ಸೌಲಭ್ಯವನ್ನು ಈ ಮೂಲಕ ಪಡೆಯುತ್ತದೆ. (ಪ್ರತಿ ಹಳ್ಳಿಯ ಜನಸಂಖ್ಯೆ ಹಾಗೂ ಅವಶ್ಯಕೆತೆಗಳ ಆಧಾರದ ಮೇಲೆ).
 • ವಿವಿಧ ತಜ್ನ್ಯರೊಂದಿಗೆ ಸಮಾಲೋಚನೆ ನಡೆಸಿ ಗ್ರಾಮೀಣ ಪ್ರದೇಶದ ಜನರ ಹಾಗೂ ಗ್ರಾಮ ಪಂಚಾಯಿತಿಯ ಸದಸ್ಯರ ಒಡನಾಟದೊಂದಿಗೆ ಕರ್ನಾಟಕದಲ್ಲಿರುವ 29,736 ಹಳ್ಳಿಗಳಿಗೂ ಅಭಿವೃದ್ಧಿ ಯೋಜನೆಗಳ ನೀಲನಕ್ಷೆಯನ್ನು ತಯಾರಿಸಲಾಗುವುದು. ಈ ನೀಲ ನಕ್ಷೆಯಲ್ಲಿ ಉತ್ತಮ ರಸ್ತೆಗಳು, ಚರಂಡಿ, ವಸತಿ ವ್ಯವಸ್ಥೆ, ಕೆರೆಗಳ ಅಭಿವೃದ್ಧಿ, ಬೀದಿಗಳೂ ಹಾಗೂ ಬೀದಿ ದೀಪಗಳು, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು, ಶಾಲೆಗಳು, ಆಸ್ಪತ್ರೆಗಳು ಹಾಗೂ ಇತರೆ ಸಂಬಂಧಿಸಿದ ಅವಶ್ಯಕತೆಗಳನ್ನುಒಳಗೊಂಡಿರುತ್ತದೆ.
 • ಪ್ರತಿ ಹಳ್ಳಿಗಳಲ್ಲಿ ಗ್ರಾಮ ಪಂಚಾಯಿತಿಗಳು ಅಭಿವೃದ್ಧಿ ಯೋಜನೆಗಳ ನೀಲಿ ನಕ್ಷೆಯನ್ನು ಕಾರ್ಯಗತ ಗೊಳಿಸುತ್ತದೆ. ಈ ಸಂಪೂರ್ಣ ಚಟುವಟಿಕೆಗಳು ಸಂಬಂಧ ಪಟ್ಟ ಸರಕಾರಿ ಇಲಾಖೆಗಳ ಪರಿಶೀಲನೆ / ಕಣ್ಗಾವಲಲ್ಲಿ ನಡೆಯುತ್ತವೆ ಹಾಗೂ ಈ ಚಟುವಟಿಕೆಗಳು ಸಂಪೂರ್ಣ ಪಾರದರ್ಶಕವಾಗಿ ದೃಶ್ಯ ಮಾಧ್ಯಮದೊಂದಿಗೆ ಸಾರ್ವಜನಿಕರಿಗೆ ವೀಕ್ಷಣೆಗೆ ಲಭ್ಯ ವಿರುತ್ತದೆ.
 • ಆಯಾ ಹಳ್ಳಿಗಳ ನೀಲ ನಕ್ಷೆಗಳ ಸಂಪೂರ್ಣ ವಿವರಗಳನ್ನು ಪ್ರತಿ ಹಳ್ಳಿಗಳಲ್ಲೂ ಸಾರ್ವಜನಿಕವಾಗಿ ವೀಕ್ಷಣೆ ಮಾಡುವ ಅವಕಾಶವಿರುತ್ತದೆ.
 • ಕೆರೆಗಳ ಅಭಿವೃದ್ಧಿ, ಪರಿಸರ ಸಂರಕ್ಷಣೆ, ಜಲ ಸಂರಕ್ಷಣೆ, ಹಳ್ಳ ಕೊಳ್ಳಗಳ ಅಭಿವೃದ್ಧಿ, ಗಿಡ- ಮರಗಳನ್ನು ನೆಡುವಿಕೆ ಇಥ್ಯಾದಿ ಚಟುವಟಿಕೆಗಳನ್ನು ಕೈಗೊಳ್ಳಲು ಹಣ ಕಾಸಿನ ನೆರವನ್ನು ಗ್ರಾಮ ಪಂಚಾಯಿತಿಗಳ ಮುಖಾಂತರ ಜನರಿಗೆ ನೀಡಲಾಗುವುದು.
 • ಕೃಷಿಯ ಆಧಾರಿತ ಸೌಲಭ್ಯಗಳನ್ನು ಸಂಪೂರ್ಣವಾಗಿ ಪಡೆಯಲು ಹತ್ತು ಎಕರೆಗಳಿಗಿಂತ ಕಡಿಮೆ ಕೃಷಿ ಭೂಮಿಯನ್ನು ಹೊಂದಿರುವ ರೈತರು ಸಹಕಾರಿ ಸಂಘಗಳನ್ನು ಸ್ಥಾಪಿಸಿ ಕೊಳ್ಳಬೇಕು (ಕೃಷಿ ಭೂಮಿಯ ಮಾಲೀಕತ್ವ ರೈತನ ಹೆಸರಿನಲ್ಲೇ ಇರುತ್ತದೆ). ಕನಿಷ್ಠ ನೂರು ಎಕರೆ ಭೂಮಿಯನ್ನು ಸಹಕಾರಿ ಸಂಘವು ಹೊಂದಿರಬೇಕು. ಈ ಮೂಲಕ ಕಡಿಮೆ ವ್ಯಚ್ಚದಲ್ಲಿ ಅಧಿಕ ಉತ್ಪಾದನೆಯನ್ನು ಕೃಷಿಯಲ್ಲಿ ಸಾಧಿಸಲು ನೆರವಾಗುತ್ತದೆ.
 • ಹತ್ತು ಎಕರೆಗಳಿಗಿಂತ ಅಧಿಕ ಜಮೀನನ್ನು ಉಳ್ಳ ರೈತರು ಸಹಕಾರಿ ಸಂಘದ ಸದಸ್ಯರಾಗುವಂತಿಲ್ಲ. ಆದರೆ ಮೊದಲ ಹತ್ತು ಎಕರೆಗಳಿಗೆ ಸಹಕಾರಿ ಸಂಘದಿಂದ ಸೌಕಾರವನ್ನು ಪಡೆಯಲು ಅರ್ಹರಾಗಿರುತ್ತಾರೆ. ಉಳಿದ ಭೂಮಿಗೆ ಸರ್ಕಾರದ ಕೃಷಿ ಯೋಜನೆಗಳಿಂದ ಸಹಕಾರಿ ಸಂಘದ ವ್ಯಾಪ್ತಿಯ ಹೊರಗಡೆ ಸೌಲಭ್ಯವನ್ನು ಪಡೆಯುತ್ತಾರೆ.
 • ಸಹಕಾರಿ ಸಂಘದ ವೇದಿಕೆಯ ಮೂಲಕ ಮಾರಾಟವಾಗುವ ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರುಕುವುದು.
 • ಪ್ರತಿ ಸಹಕಾರಿ ಸಂಘಗಳಲ್ಲಿ ಕೃಷಿಯೊಂದಿಗೆ ಪಶುಸಂಗೋಪನೆ (ಕುರಿ ಕೋಳಿ ಇತ್ಯಾದಿ ಚಟುವಟಿಕೆಗಳು ಆಯಾ ಪ್ರದೇಶಗಳಿಗೆ ಅನುಸಾರವಾಗಿ ಸೇರಿಕೊಳ್ಳಬಹುದಾಗಿದೆ.
 • ಸಹಕಾರಿ ಸಂಘಗಳಿಗಾಗಿ ಮೀಸಲಿಡುವ ಹಣ ಕಾಸನ್ನು ಗ್ರಾಮ ಪಂಚಾಯಿತಳ ಮೂಲಕ

upendra

– ಕೃಷಿಗೆ ಸಂಬಂಧಿತ ಯಂತ್ರೋಪಕಾರಣಗಳು (ಉದಾ: ಟ್ರ್ಯಾಕ್ಟರ್, ತುಂತುರು ನೀರಾವರಿ, ಹನಿ ನೀರಾವರಿ, ಬಿತ್ತನೆ ಬೀಜ ಹಾಗೂ ಗೊಬ್ಬರ).

– ತಂತ್ರ ಜ್ನ್ಯಾನ (ಉದಾ: ಹವಾಮಾನ ವರದಿ, ಮಾರುಕಟ್ಟೆ ಬೇಡಿಕೆ, ಬೆಲೆ ಮಾದರಿ, ಮಣ್ಣು ಪರೀಕ್ಷೆ).

– ರೇಷ್ಮೆ ಸಾಕಾಣೆಗೆ ಸಹಾಯ
– ಪಶುಸಂಗೋಪನೆಗೆ ಸಹಾಯ
-ಮೀನುಗಾರಿಕೆಗೆ ಸಹಾಯ
-ತೋಟಗಾರಿಕೆಗೆ ಸಹಾಯ
– ವಿದ್ಯುತ್ ಮತ್ತು ಜಲ ನಿರ್ವಹಣೆಗೆ ಸಹಾಯ

 • ಸಹಕಾರಿ ಸಂಘಗಳು ಮಾರುಕಟ್ಟೆ ಬೇಡಿಕೆಯ ಆಧಾರದ ಮೇಲೆ ತಜ್ನ್ಯರು ನೀಡುವ ಮಾಹಿತಿಯನ್ನು ಪಡೆದು ರೈತರು ಬೆಳೆಯಬೇಕಾದ ಬೆಳೆಗಳ ಆಯ್ಕೆಯನ್ನು ನಿರ್ಧರಿಸುತ್ತವೆ.
 • ಸಹಕಾರಿ ಸಂಘಗಳು ಬೆಳೆಯುವಂತಹ ಕೃಷಿಯೋತ್ಪನ್ನಗಳಿಗೆ ಮುಂಗಡವಾಗಿ ಮಾರುಕಟ್ಟೆಯ ಬೇಡಿಕೆಯ ಆಧಾರದ ಮೇಲೆ ರೈತನೊಂದಿಗೆ ಹಾಗು ತಜ್ನ್ಯರೊಂದಿಗೆ ಸಮಾಲೋಚನೆ ನಡೆಸಿ ‘ಸೂಕ್ತವಾದ ಬೆಳೆಯನ್ನು’ ನಿಗದಿ ಪಡಿಸುತ್ತದೆ.
 • ಸರ್ಕಾರವು ಸಹಕಾರಿ ಸಂಘಗಳಿಗೆ ಮಾಹಿತಿ, ಸಲಹೆ ಸೂಚನೆ ಹಾಗೂ ಮಾರ್ಗದರ್ಶನವನ್ನು ನೀಡಲು ಗ್ರಾಮೀಣಾಭಿವೃದ್ಧಿ, ವಸತಿ, ಸಮಾಜ ಕಲ್ಯಾಣ, ತೋಟಗಾರಿಕೆ, ಮೀನು ಸಾಗಾಣಿಕೆ, ರೇಷ್ಮೆ ಸಾಗಾಣಿಕೆ, ಪಶು ಸಂಗೋಪನೆ. ಕೃಷಿ ಇಲಾಖೆ, ಶಿಕ್ಷಣ ಇಲಾಖೆ, ಆರ್ಗೋಯ ಇಲಾಖೆ. ಜಲಸಂಪನ್ಮೂಲ ಇಲಾಖೆ ಮತ್ತು ಸಹಕಾರ ಇಲಾಖೆಗಳಿಂದ ಪ್ರತ್ಯೇಕವಾಗಿ ತಜ್ನ್ಯರನ್ನು ಮತ್ತು ಸಿಬ್ಬಂಧಿಗಳನ್ನು ನಿಯೋಜಿಸಲಾಗುತ್ತದೆ.
 • ಕೃಷಿ ಉತ್ತ್ಪನ್ನಗಳಿಗಾಗಿ ಕೋಲ್ಡ್ ಸ್ಟೋರೇಜ್ (ಶೀತಲ) / ಸಾಮಾನ್ಯ ಉಗ್ರಾಣ ವ್ಯವಸ್ಥೆಗಳನ್ನು ಮತ್ತು ಕೃಷಿ ಭೂಮಿಯಿಂದ ಉಗ್ರಾಣಕ್ಕೆ ಹಾಗೂ ಉಗ್ರಾಣದಿಂದ ಮಾರುಕಟ್ಟೆಗೆ / ಗ್ರಾಹಕರಿಗೆ ಸಾರಿಗೆ ಸೌಲಭ್ಯವನ್ನು ಮಾಡಿಕೊಡಲಾಗುತ್ತದೆ.
 • ಕೃಷಿ ಉತ್ಪನ್ನಗಳ ಮೌಲ್ಯವರ್ಧನಗೆ ಹಾಗೂ ಸ್ಥಳೀಯ ಉದ್ಯೋಗಗಳ ಸೃಷ್ಟಿಗಾಗಿ ಕೃಷಿ ಗುಡಿ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳನ್ನು ಸ್ಥಾಪಿಸಿ, ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು.
 • ಸಹಕಾರಿ ಸಂಘಗಳ ವತಿಯಿಂದ ಬೆಲೆ ವಿಮೆಯನ್ನು ಒದಗಿಸಲಾಗುವುದು.
 • ಸಹಕಾರಿ ಸಂಘಗಳ ಎಲ್ಲಾ ಚಟುವಟಿಕೆಗಳು ಹಾಗೂ ಹಣಕಾಸು ವ್ಯವಹಾರಗಳನ್ನು ಸಂಪೂರ್ಣ ಪಾರದರ್ಶಕತೆಯಲ್ಲಿ ದೃಶ ಮಾಧ್ಯಮದ ಮೂಲಕ ಸೂಕ್ತ ದಾಖಲೆ ಗಳೊಂದಿಗೆ ಸಂಘದ ಎಲ್ಲಾ ಸದಸ್ಯರುಗಳಿಗೆ ನಿರಂತರವಾಗಿ ತೆರೆದಿಟ್ಟಿರಲಾಗುವುದು.
 • ಕೃಷಿ ಉತ್ಪನ್ನಗಳನ್ನು ಸ್ಥಳೀಯವಾಗಿ ಮಾರಾಟ ಮಾಡಲು ಸಣ್ಣ ಮತ್ತು ದೊಡ್ಡ ಪ್ರಮಾಣದ ಮಳಿಗೆಗಳನ್ನು ಪ್ರದೇಶಗಳಿಗೆ ಅನುಸಾರವಾಗಿ ಸಂಘದ ಮೂಲಕ ಸ್ಥಾಪಿಸಲಾಗುವುದು.
 • ಸಹಕಾರಿ ಸಂಘಗಳು ಸ್ಮಾರ್ಟ್ ಕಾರ್ಡ್ ಗಳನ್ನು ರೈತರಿಗೆ ಅನುಕೂಲವಾಗಲು ನೀಡುತ್ತವೆ. (ಈ ಸ್ಮಾರ್ಟ್ ಕಾರ್ಡಿನಲ್ಲಿ ರೈತನು ನಡೆಸುವಂತಹ ಪ್ರತಿಯೊಂದು ವ್ಯಾಪಾರ-ವಹಿವಾಟುಗಳು, ಕೊಡು ಕೊಳ್ಳುವಿಕೆ, ಸಾಲ ಸೌಲಭ್ಯಗಳಿಗೆ ಸಂಬಂಧ ಪಟ್ಟ ಪ್ರತಿಯೊಂದು ಹಾಗೂ ದಾಖಲೆಗಳು ಲಭ್ಯ ಇರುತ್ತವೆ).
 • ಸರ್ಕಾರವು ಗ್ರಾಹಕಿರಿಗೆ ಆನ್ಲೈನ್ ನಲ್ಲಿ ಕೃಷಿ ಉತ್ಪನ್ನಗಳನ್ನು ಆರ್ಡರ್ (ಖರೀದಿ) ಮಾಡಲು ನೆರವಾಗುವಂತಹ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಸೇವೆಯನ್ನು ಒದಗಿಸುತ್ತದೆ. ಸಹಕಾರಿ ಸಂಘಗಳು ಕೃಷಿ ಉತ್ಪನ್ನಗಳನ್ನು ರೈತರಿಂದ ನೇರವಾಗಿ ಗ್ರಾಹಕರಿಗೆ/ ಖರೀದಿಗಾರನಿಗೆ ತಲುಪಿಸುವ ಕಾರ್ಯ ನಿರ್ವಹಿಸುತ್ತದೆ.

upendra

ನಿಮ್ಮೆಲ್ಲರ ಅನಿಸಿಕೆ ಅಭಿಪ್ರಾಯ, ಸಲಹೆಗಳ ಆಧಾರದ ಮೇಲೆ ಪರಿಷ್ಕರಿಸಿ ಅಂತಿಮ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಇದೇ ರೀತಿ ಪ್ರಣಾಳಿಕೆಯ ಇನ್ನುಳಿದ ಭಾಗಗಳನ್ನು ನಿಮ್ಮ ಜೊತೆ ಸಧ್ಯದಲ್ಲೇ ಹಂಚಿ ಕೊಳ್ಳುತ್ಹೆಣೆ ಎಂದು ಉಪೇಂದ್ರ ಅವರು ತಿಳಿಸಿದ್ದಾರೆ. ಹಾಗೂ ಅಂತಿಮ ಅಧಿಕೃತ ಪ್ರಣಾಳಿಕೆಯ ಎಲ್ಲಾ ಭಾಗಗಳನ್ನು ಶೀಘ್ರದಲ್ಲೀ ಬಿಡುಗಡೆ ಮಾಡುತ್ತೇನೆ ಎಂದೂ ತಿಳಿಸಿದ್ದಾರೆ. ಈ ವಿಷ್ಯವಾಗಿ ಜನರ ಜೊತೆ ನೇರ ಸಂಪರ್ಕ, ಚರ್ಚೆ ಹಾಗೂ ವಿವರಣೆಗೆ ಲಭ್ಯವಿರುತ್ತೇನೆ ಎಂದು ಉಪೇಂದ್ರ ಅವರು ಹೇಳಿದ್ದಾರೆ.

Comments

comments

[jetpack_subscription_form]
SHARE
Previous article10 Things that Happen Only in Bengaluru BMTC Buses and you can’t deny to relate them
Next article15 Popular and Old Temples in Bangalore Known for their Unparalleled Beauty
mm
Shrinag is a writer, designer, and a social media buff who loves to scribble, explore and present the things in a creative way. When he is not writing or designing, he loves reading books, meditate, travel, and paint.

LEAVE A REPLY

Please enter your comment!
Please enter your name here